ವನಿತಾ ರತ್ನಂ ಪ್ರಶಸ್ತಿಯನ್ನು ಸಾಮಾಜಿಕ ಸೇವೆ, ಶಿಕ್ಷಣ, ಸಾಹಿತ್ಯ, ಆಡಳಿತ, ವಿಜ್ಞಾನ,ಕಲೆ ಮತ್ತು ಸಂಸ್ಕೃತಿ, ಆರೋಗ್ಯ, ಮಾಧ್ಯಮ, ಕ್ರೀಡೆ, ನಟನೆ ಮತ್ತು ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲು ಕೇರಳ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಹಿಂದೆ ಸಮಾಜ ಕಲ್ಯಾಣ ಇಲಾಖೆ ) ನೀಡುತ್ತದೆ. ಇದನ್ನು ಪ್ರತಿ ವರ್ಷವೂ ನೀಡಲಾಗುತ್ತದೆ. . ತಲಾ ೩ ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಹೊಂದಿರುವ ಪ್ರಶಸ್ತಿಯನ್ನು ಡಿಸೆಂಬರ್ 2013 ರಲ್ಲಿ ಸ್ಥಾಪಿಸಲಾಯಿತು ಮತ್ತು 2014 ರಿಂದ ನೀಡಲು ಪ್ರಾರಂಭಿಸಲಾಯಿತು == ಪ್ರಶಸ್ತಿಯ ಹೆಸರುಗಳು == ಅಕ್ಕಮ್ಮ ಚೆರಿಯನ್ ಪ್ರಶಸ್ತಿ. ‍ ಸಮಾಜ ಸೇವಾ ಕೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. === ಪ್ರಶಸ್ತಿಯ ಹೆಸರಿನಲ್ಲಿರುವ ಸಾಧಕಿ === ೧೯೦೯ರಲ್ಲಿ ಕೇರಳರ ತ್ರಿವಾಂಕೂರಿನಲ್ಲಿ ಜನಿಸಿದ ಅಕ್ಕಮ್ಮ ಚೆರಿಯನ್ ಅವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು. ಇವರನ್ನು ತ್ರವಾಂಕೂರಿನ ಝಾನ್ಸಿ ರಾಣಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಇವರು ಅಸಹಕಾರ ಚಳುವಳಿ, ಕೌಡಿಯಾ ಅರಮನೆಗೆ ಜಾಥಾ, ಕ್ವಿಟ್ ಇಂಡಿಯಾ ಚಳುವಳಿ ಮುಂತಾದ ಹೋರಾಟಗಳಲ್ಲಿ ಭಾಗವಹಿಸಿದರು. ಇವರು ೧೯೩೮ರಲ್ಲಿ ದೇಸಸೇವಿಕಾ ಸಂಘ ಎಂಬ ಸಹಕಾರ ಸಂಘವನ್ನು ಪ್ರಾರಂಭಿಸಿದರು. ತಮ್ಮಸ್ವಾತಂತ್ರ್ಯ ಹೋರಾಟಕ್ಕಾಗಿ ಇವರು ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿದರು. ೧೯೪೭ರಲ್ಲಿ ಸ್ವಾತಂತ್ರ್ಯಾನಂತರ ಟ್ರವಾಂಕೂರಿನ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಲೋಕಸಭೆಗೆ ಟಿಕೇಟ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ಇವರು ನಂತರದ ದಿನಗಳಲ್ಲಿ ರಾಜಕೀಯದಿಂದ ದೂರ ಉಳಿದರು. ಕ್ಯಾಪ್ಟನ್ ಲಕ್ಷ್ಮಿ ಪ್ರಶಸ್ತಿ . ಶಿಕ್ಷಣ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಕಮಲಾ ಸುರಯ್ಯ ಪ್ರಶಸ್ತಿ. ಸಾಹಿತ್ಯ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ರಾಣಿ ಲಕ್ಷ್ಮಿ ಬಾಯಿ ಪ್ರಶಸ್ತಿ. ಆಡಳಿತ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ನ್ಯಾಯಮೂರ್ತಿ ಫಾತಿಮಾ ಬೀವಿ ಪ್ರಶಸ್ತಿ.ವಿಜ್ಞಾನ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಮೃಣಾಲಿನಿ ಸಾರಾಭಾಯ್ ಪ್ರಶಸ್ತಿ. ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಮೇರಿ ಪುನ್ನೆನ್ ಲೂಕೋಸ್ ಪ್ರಶಸ್ತಿ. ಆರೋಗ್ಯ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಅನ್ನಿ ತಯ್ಯಿಲ್ ಪ್ರಶಸ್ತಿ. ಮಾಧ್ಯಮ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಕುಟ್ಟಿಮಾಲುಅಮ್ಮ ಪ್ರಶಸ್ತಿ. ಕ್ರೀಡಾ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಸುಕುಮಾರಿ ಪ್ರಶಸ್ತಿ. ನಟನಾ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಅನ್ನಿ ಮಸ್ಕರೇನ್ ಪ್ರಶಸ್ತಿ. ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. == ವನಿತಾ ರತ್ನಂ ಪ್ರಶಸ್ತಿಗಳು 2014 == == ವನಿತಾ ರತ್ನಂ ಪ್ರಶಸ್ತಿಗಳು 2015 == == ವನಿತಾ ರತ್ನಂ ಪ್ರಶಸ್ತಿಗಳು 2016 == == ವನಿತಾ ರತ್ನಂ ಪ್ರಶಸ್ತಿಗಳು 2017 == === ಸ್ವೀಕರಿಸಿದವರು === 2017 ನೇ ಸಾಲಿನ ಪ್ರಶಸ್ತಿಗಳನ್ನು 3 ಮಾರ್ಚ್ 2018 ರಂದು 11 ವ್ಯಕ್ತಿಗಳಿಗೆ ಘೋಷಿಸಲಾಯಿತು, ಪ್ರತಿಯೊಬ್ಬರಿಗೂ ₹ ೩ ಲಕ್ಷ ರೂಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. === ೨೦೧೭ರ ಪ್ರಶಸ್ತಿ ಪ್ರಧಾನ === ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಿರುವನಂತಪುರಂನ ವಿಜೆಟಿ ಹಾಲ್‌ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 8 ಮಾರ್ಚ್ 2018 ರಂದು 2017 ರ ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವೆ ಕೆ.ಕೆ.ಶೈಲಜಾ ವಹಿಸಿದ್ದರು. ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸಿದ ನಂತರ ಇದೇ ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿತ್ತು. === ಗ್ಯಾಲರಿ === == ವನಿತಾ ರತ್ನಂ ಪ್ರಶಸ್ತಿಗಳು 2018 == == ವನಿತಾ ರತ್ನಂ ಪ್ರಶಸ್ತಿಗಳು 2019 == ೨೦೧೯ ನೇ ಸಾಲಿನ ಪ್ರಶಸ್ತಿಗಳನ್ನು 4 ಮಾರ್ಚ್ 2020 ರಂದು ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆಕೆ ಶೈಲಜಾ ಅವರು ಘೋಷಿಸಿದರು. ಪ್ರಶಸ್ತಿಯನ್ನು 5 ವ್ಯಕ್ತಿಗಳಿಗೆ ನೀಡಲಾಗುವುದು ಮತ್ತು ಪ್ರತಿಯೊಬ್ಬರೂ ₹100,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಸ್ವೀಕರಿಸುತ್ತಾರೆ. === ಸ್ವೀಕರಿಸುವವರು === == ಉಲ್ಲೇಖಗಳು ==